Kohler Experience Centre, Bengaluru - Articles

ವಿವಿಧ ರೀತಿಯ ಮಂಗಳಸೂತ್ರದ ವಿನ್ಯಾಸಗಳು

ಮಂಗಳಸೂತ್ರವು ಭಾರತೀಯ ವಿವಾಹ ಆಚರಣೆ ಮತ್ತು ವಧುವಿನ ಆಭರಣಗಳಲ್ಲಿ ಒಂದು ಪ್ರಮುಖ ಅಂಶವಾಗಿದೆ. ಮಂಗಳಸೂತ್ರವೆಂದರೆ ಮಂಗಳಕರ ಮತ್ತು ಪವಿತ್ರ ದಾರ ಎಂಬುದನ್ನು ಸೂಚಿಸುತ್ತದೆ ಮತ್ತು ಇದು ಮದುವೆಯಾಗಿರುವುದರ ದ್ಯೋತಕವಾಗಿರುತ್ತದೆ. ಮಂಗಳಸೂತ್ರವು ವೈವಾಹಿಕ ಸ್ಥಿತಿಯ ಸಂಕೇತವಾಗಿದ್ದುಇದು ಎರಡು ಆತ್ಮವನ್ನು ಸುಂದರವಾಗಿ ಸದಾ ಬಂಧಿಸುವ ಒಂದು ಸೂಚಕವಾಗಿದೆ.

ಭಾರತದಲ್ಲಿ ಹೆಚ್ಚಾಗಿ ಪ್ರತಿಯೊಂದು ಸಮುದಾಯ ಮತ್ತು ಪ್ರದೇಶದಲ್ಲಿ ಮಂಗಳಸೂತ್ರವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ, ಚಿನ್ನವು ಸಮೃದ್ಧಿ ಮತ್ತು ಬಾಳಿಕೆಯನ್ನು ಹೊಂದಿರುತ್ತದೆ.  ಭಾರತದೆಲ್ಲೆಡೆ ಮಹಿಳೆಯರು ಚಿನ್ನದ ಮಂಗಳಸೂತ್ರವನ್ನು ಧರಿಸುತ್ತಾರೆ. ಮಂಗಳಸೂತ್ರದ ಪಾವಿತ್ರ್ಯತೆಯು, ಭಾಷೆ, ಸಂಸ್ಕೃತಿ ಮತ್ತು ಧರ್ಮದ ಎಲ್ಲಾ ಚೌಕಟ್ಟುಗಳನ್ನು ಮೀರಿದೆ. ಅದರ ಪಾರಿಭಾಷಿಕ ಬಳಕೆಯಲ್ಲಿ ಮಂಗಳಸೂತ್ರವು ಕಪ್ಪು ಹರಳು ಪೋಣಿಸಿರುವ ಹಳದಿ ದಾರವಾಗಿದೆ.

ಭಾರತದಾದ್ಯಂತ ವಧುವು ಧರಿಸುವ ವಿವಿಧ ರೀತಿಯ ಮಂಗಳಸೂತ್ರಗಳ ಬಗೆಗಿನ ಮಾಹಿತಿ ಇಲ್ಲಿದೆ.

ಕಾಶ್ಮೀರಿ ವಧುವು ಧರಿಸುವ ಮಂಗಳಸೂತ್ರವನ್ನು ಡಿಝೋರ್ಅಥವಾ ಡೆಝೂರುಎಂದು ಕರೆಯಲಾಗುತ್ತದೆ. ಇದೊಂದು ಆಕರ್ಷಕ ವಿನ್ಯಾಸವಾಗಿದ್ದು, ಅದರಲ್ಲಿ ಚಿನ್ನದಿಂದ ತಯಾರಿಸಲಾದ ಕಿವಿಯೋಲೆಗಳಿದ್ದು, ಅವುಗಳನ್ನು ಕೆಂಪುದಾರದಿಂದ ನೇಯಲಾಗಿರುತ್ತದೆ. ಇದನ್ನು ವಧುವಿನ ಪೋಷಕರು ನೀಡುತ್ತಾರೆ, ಮದುವೆಯ ನಂತರ ವರನ ಪೋಷಕರು ಅದಕ್ಕೆ ಚಿನ್ನದ ಸರದೊಂದಿಗೆ ಬದಲಾಯಿಸುತ್ತಾರೆ. ಆ ಚಿನ್ನದ ಸರವನ್ನು ಆತ್ಎಂದು ಕರೆಯಲಾಗುತ್ತದೆ.

ಮಹಾರಾಷ್ಟ್ರದಲ್ಲಿ ವಧು ಧರಿಸುವ ಮಂಗಳಸೂತ್ರವನ್ನು ವಾಟಿ’/’ವಟಿ’ ಎಂದು ಕರೆಯಲಾಗುತ್ತದೆ. ಈ ಮಂಗಳಸೂತ್ರದ ವಿನ್ಯಾಸದಲ್ಲಿ ಎರಡು ಸಣ್ಣ ಚಿನ್ನದ ಕಪ್‍ಗಳಂತಹ ಪೆಂಡೆಂಟ್‍ಗಳನ್ನು ಹೊಂದಿದ್ದು, ಅದನ್ನು ಸರದೊಂದಿಗೆ ಕಪ್ಪು ಮತ್ತು ಚಿನ್ನದ ಮಣಿಗಳನ್ನು ಪೋಣಿಸಿ ಧರಿಸಲಾಗುತ್ತದೆ. ಮಂಗಳಸೂತ್ರದಲ್ಲಿರುವ ಎರಡು ಕಪ್‍ಗಳು ಪುರುಷ ಮತ್ತು ಸ್ತ್ರೀಯರ ಪರಸ್ಪರ ಬಂಧನವನ್ನು ಸೂಚಿಸುತ್ತದೆ. ಈ ವಿನ್ಯಾಸವು ಗುಜರಾತ್ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರಚಲಿತದಲ್ಲಿದೆ.

ಸಿಂಧಿ ಸಮುದಾಯದಲ್ಲಿ ವರನು ವಧುವಿಗೆ ವಿವಾಹ ದಿನದಂದು ಮಂಗಳಸೂತ್ರವನ್ನು ಉಡುಗೊರೆಯಾಗಿ ನೀಡುತ್ತಾನೆ. ಇದನ್ನು ಸಾಮಾನ್ಯವಾಗಿ ಚಿನ್ನದ ಮಣಿ ಹೊಂದಿರುವ ಚೈನ್‍ನೊಂದಿಗೆ ಕಪ್ಪು ಮಣಿ ಪೋಣಿಸಿ ಚಿನ್ನದ ಪೆಂಡೆಂಟ್ ಅಳವಡಿಸಿ ಧರಿಸಲಾಗುತ್ತದೆ.

ಬಿಹಾರದ ವಧುವು ಧರಿಸುವ ಮಂಗಳಸೂತ್ರವನ್ನು ಟಾಗ್‍ಪಾಗ್ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಕಮಾನು ಆಕಾರದ ಪೆಂಡೆಂಟ್‍ನೊಂದಿಗೆ ವಿವಿಧ ವಿನ್ಯಾಸಗಳನ್ನು ಹೊಂದಿರುತ್ತದೆ ಮತ್ತು ಚಿನ್ನದ ಸರಕ್ಕೆ ಕಪ್ಪು ಮಣಿಯನ್ನು ಪೋಣಿಸಿ ಧರಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಬಿಹಾರ ಸಂಸ್ಕೃತಿಯಲ್ಲಿ ಕಾಲುಂಗರಕ್ಕೆ ಬಿಚ್ವಾಎಂದು ಕರೆಯಲಾಗುತ್ತಿದ್ದು, ಇದು ಕೂಡ ವಧುವಿನ ಆಭರಣದ ಪ್ರಮುಖ ಭಾಗವಾಗಿದೆ.

ಇನ್ನು ದಕ್ಷಿಣದ ರಾಜ್ಯಗಳಿಗೆ ಬಂದಾಗ, ಕೇರಳದ ಹಿಂದೂ ವಧುವು ಧರಿಸುವ ಮಂಗಳಸೂತ್ರವನ್ನು ತಾಳಿಅಥವಾ ಎಲಾ ತಾಳಿಎಂದು ಕರೆಯಲಾಗುವುದು, ತಾಳಿಯು ಎಲೆಯ ಆಕಾರದ ಹೋಲಿಕೆಯಿಂದಿರುವ ಕಾರಣ ಅದನ್ನು ಆ ರೀತಿ ಕರೆಯುತ್ತಾರೆ. ಈ ಮಂಗಳಸೂತ್ರದ ವಿನ್ಯಾಸವು ಗ್ರಾಹಕೀಯಗೊಂಡು ವಜ್ರ, ಓಂ ಸಂಕೇತ ಅಥವಾ ವರನ ಇನೀಷಿಯಲ್‍ಗಳನ್ನು ಒಳಗೊಂಡಿರುತ್ತವೆ. ಕೇರಳದ ಸಿರಿಯನ್ ಕ್ರಿಶ್ಚಿಯನ್ನರ ಮಂಗಳಸೂತ್ರವನ್ನು ಮಿನ್ನುಎಂದು ಕರೆಯಲಾಗುತ್ತದೆಯಲ್ಲದೇ, ಅದರಲ್ಲಿ ಕ್ರಾಸ್ ಚಿಹ್ನೆ ಇರುತ್ತದೆ. ಈ ಮಂಗಳಸೂತ್ರವನ್ನು ಹೆಚ್ಚಾಗಿ ಚಿನ್ನದ ಸರದೊಂದಿಗೆ ಪೋಣಿಸಿ ಧರಿಸಲಾಗುತ್ತದೆ

ತಮಿಳುನಾಡಿನಲ್ಲಿ ಮಂಗಳಸೂತ್ರವನ್ನು  ಅನೇಕ ಹೆಸರುಗಳಿಂದ ಕರೆಯುತ್ತಾರೆ ಅಂದರೆ ತಾಳಿ’, ‘ತಿರುಮಾಂಗಲ್ಯಂ’, ‘ಮಾಂಗಲ್ಯಂಮತ್ತು ತಾಳಿ ಕೂಡುಎಂಬೆಲ್ಲಾ ಹೆಸರಿನಿಂದ ಕರೆಯುತ್ತಾರೆ. ವಿವಿಧ ಸಮುದಾಯಗಳನ್ನು ಅವಲಂಬಿಸಿ, ಮಂಗಳಸೂತ್ರದ ವಿನ್ಯಾಸಗಳು ತುಳಸಿ, ಶಿವ, ವಿಷ್ಣುದೇವಿ ಮೀನಾಕ್ಷಿ ಇತ್ಯಾದಿ ರೂಪದಲ್ಲಿರುತ್ತವೆ. ಮದುವೆಯ ದಿನ ವರನು ವಧುವಿಗೆ ಹಳದಿ ದಾರದಲ್ಲಿ ಮಂಗಳಸೂತ್ರವನ್ನು ಬಿಗಿಯುತ್ತಾನೆ.

ಭಾರತೀಯ ವಿವಾಹ ಪದ್ಧತಿಯು ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಹೆಚ್ಚು ಶ್ರೀಮಂತವಾಗಿವೆ. ಅನೇಕ ಪೀಳಿಗೆಗಳ ಸ್ತ್ರೀಯರು ಧರಿಸುವ ಪವಿತ್ರ ದಾರವು ಅನೇಕ ಭಾವನಾತ್ಮಕ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಈ ಮಂಗಳಸೂತ್ರವೆಂಬುದು ವಿವಾಹಿತ ಭಾರತೀಯ ನಾರಿಗೆ ಅತ್ಯಂತ ಸುಲಭವಾಗಿ ಲಭಿಸುವ ಅತೀ ಮೌಲ್ಯಯುತ ಆಭರಣ ತುಣುಕಾಗಿದೆ. ಸಹಸ್ರಾರು ವಧುಗಳು ತಮ್ಮ ಮಂಗಳಸೂತ್ರವನ್ನು ವಜ್ರ, ಅಮೂಲ್ಯ ರತ್ನಗಳು ಮತ್ತು ಹರಳುಗಳೊಂದಿಗೆ ಗ್ರಾಹಕೀಯಗೊಳಿಸುವ ಮೂಲಕ ಅವುಗಳಿಗೆ ವಿಶಿಷ್ಠ ಸ್ಥಾನ ನೀಡುತ್ತಿದ್ದಾರೆ.

ನಿಮಗೆ ಸೂಕ್ತವಾದ ಮಂಗಳಸೂತ್ರವನ್ನು ನಮ್ಮ ಸಂಗ್ರಹದಿಂದ ಆಯ್ಕೆ ಮಾಡಲು ಬ್ರೌಸ್ ಮಾಡಿರಿ!